ಒಂದಷ್ಟೂ ಸ್ಪಷ್ಟ, ಹಣದ ವ್ಯಾಮೋಹಕ್ಕೆ ಬಿದ್ದಿರುವ ಮಾಧ್ಯಮಗಳು ನಾಗರಿಕರನ್ನು ವಂಚಿಸುತ್ತಿವೆ. ಎಷ್ಟೊ ಜನರು ಮಾಧ್ಯಮಗಳಲ್ಲಿ ಬಂದಿರುವ ಚಿತ್ರ ವಿಮರ್ಶೆ ನೋಡಿಕೊಂಡೇ ಥಿಯೇಟ್ಗೆ ಕಾಲಿಡುವ ಮನಸ್ಸು ಮಾಡುತ್ತಾರೆ. ಇತ್ತ ಮಾಧ್ಯಮಗಳೇ ಕೆಟ್ಟ ಚಿತ್ರವೊಂದನ್ನು ಹೊಗಳಿ ಅಟ್ಟಕ್ಕೇರಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ????
Monday, October 26, 2009
ಮಾಧ್ಯಮಗಳೂ ಮೋಸ ಮಾಡ್ತವಾ???
ಮಾಧ್ಯಮಗಳೂ ಮೋಸ ಮಾಡ್ತವಾ??? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಬಹುಷಃ ಇದು ಸಕಾಲ. ಟಿವಿ, ಪತ್ರಿಕೆಗಳು ಹಠಕ್ಕೆ ಬಿದ್ದಿರುವಂತೆ ’ಮಾಧ್ಯಮ ತತ್ವ’ಗಳನ್ನು ಗಾಳಿಗೆ ತೂರುತ್ತಿರುವ ಈ ಸಂದರ್ಭದಲ್ಲಿ ಇದು ಪ್ರಸ್ತುತ ಪ್ರಶ್ನೆ. ಇದೇ ಥೀಮ್ ಹಿಡಿದು ಹುಡುಕಾಟಕ್ಕೆ ಹೊರಟರೆ ಉತ್ತರ ’ಹೌದು’ ಎಂದೇ ಆಗಿರುತ್ತದೆ. ಈಗಿನ ರಿಯಾಲಿಟಿ ಷೋಗಳನ್ನು, ’ಭಯಾನಕ, ವಿಸ್ಮಯ, ನಿಗೂಢ, ಹಾಗೂ ಅಗೋಚರ...’ ಎಂದು ಜನರನ್ನು ಕುರಿಮಂದೆಯಂತೆ ಮರುಳು ಮಾಡುತ್ತಿರುವ ಕಾರ್ಯಕ್ರಮಗಳನ್ನು ನೋಡಿದರೆ ಈ ಪ್ರಶ್ನೆಗೆ ಸೂಕ್ತ ಸಾಕ್ಷ್ಯಗಳು ದೊರೆಯುತ್ತವೆ. ಅಷ್ಟಕ್ಕೂ ಈ ಪ್ರಶ್ನೆ ಈಗ ಹುಟ್ಟಿದ್ದಾದರೂ ಯಾಕೆ? ಇತ್ತೀಚೆಗೆ ಬಿಡುಗಡೆಯಾದ, ಯೋಗರಾಜಭಟ್ ನಿರ್ದೇಶಿಸಿ, ಜಯಂತ ಕಾಯ್ಕಿಣಿ ಸಾಹಿತ್ಯ ಬರೆದು, ಮನೊಮೂರ್ತಿ ಸಂಗೀತ ಒದಗಿಸಿರುವ ’ಮನಸಾರೆ’ ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಬಂದ ರಿವ್ಯೂ ನೋಡಿ, ಚಿತ್ರ ವೀಕ್ಷಿಸಿ ಬಂದರೆ ಇದು ಕೇವಲ ಪ್ರಶ್ನೆ ಮಾತ್ರ ಅಲ್ಲ ಈ ಹೊತ್ತಿನ ಜರೂರು ಎಂದು ಪ್ರಜ್ಞಾವಂತರ್ಯಾರಿಗಾದರೂ ಅನಿಸದೆ ಇರುವುದಿಲ್ಲ.
’ಮನಸಾರೆ’ ಎಂಬ ಹುಚ್ಚರ ಚಿತ್ರಕ್ಕೆ ಬಹುತೇಕ ಮುದ್ರಣ, ದೃಶ್ಯ ಮತ್ತು ಇತ್ತೀಚಿನ ಇಂಟರ್ನೆಟ್ ಮಾಧ್ಯಮಗಳು ಭಾರಿ ಪ್ರಚಾರ ನೀಡಿದವು; ಇನ್ನಿಲ್ಲದಂತೆ ಬರೆದವು. ಇದೊಂದು ಪ್ರೇಮಕಾವ್ಯ, ಚೆಂದದ ನಿರೂಪಣೆ, ಘಟನಾನುಘಟಿಗಳ ಮಹಾ ಸಂಯೋಜನೆ ಎಂದೆಲ್ಲ ಹೊಗಳಿದವು. ಯಾವ ಆಧಾರದ ಮೇಲೆ ಈ ವಿಮರ್ಶೆ ಬರೆದವು ಎನ್ನುವುದೇ ಈಗನ ಪ್ರಶ್ನೆ. ಅಲ್ಲದೆ ಎಲ್ಲ ಮಾಧ್ಯಮದಲ್ಲೂ ಮನಸಾರೆ ಚಿತ್ರದ್ದೇ ಮಾತು. ಚಿತ್ರ ಬಿಡುಗಡೆಯಾದ ಮೊದಲ ವಾರ ಎಲ್ಲವೂ ಮನಸಾರೆಮಯವಾಗಿತ್ತು.
ಒಂದಷ್ಟೂ ಸ್ಪಷ್ಟ, ಹಣದ ವ್ಯಾಮೋಹಕ್ಕೆ ಬಿದ್ದಿರುವ ಮಾಧ್ಯಮಗಳು ನಾಗರಿಕರನ್ನು ವಂಚಿಸುತ್ತಿವೆ. ಎಷ್ಟೊ ಜನರು ಮಾಧ್ಯಮಗಳಲ್ಲಿ ಬಂದಿರುವ ಚಿತ್ರ ವಿಮರ್ಶೆ ನೋಡಿಕೊಂಡೇ ಥಿಯೇಟ್ಗೆ ಕಾಲಿಡುವ ಮನಸ್ಸು ಮಾಡುತ್ತಾರೆ. ಇತ್ತ ಮಾಧ್ಯಮಗಳೇ ಕೆಟ್ಟ ಚಿತ್ರವೊಂದನ್ನು ಹೊಗಳಿ ಅಟ್ಟಕ್ಕೇರಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ????
ಇದು ಬೇಲಿಯೇ ಎದ್ದು ಹೊಲ ಮೇದ ಕತೆಯಾಗಿದೆ. ಮಾದ್ಯಮಗಳು ಇಂದು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿವೆ. ಇಂದು ಹಣಕೊಟ್ಟು ಬರೆಸುವ ಪ್ರಾಯೋಜಿತ ಬರಹಗಳು ಸಾಮಾನ್ಯವಾಗಿವೆ. ಜನ ಮಾಧ್ಯಮಗಳ ಮಾತನ್ನು ವೇದವಾಕ್ಯ ಎಂದು ನಂಬುತ್ತಾರೆ. ಜನರ ಈ ನಂಬಿಕೆಯನ್ನೇ ದೌರ್ಬಲ್ಯ ಎಂದು ಭಾವಿಸಿ ಮಾಧ್ಯಮಗಳು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಮಾಧ್ಯಮಗಳ ಸಾಮಾಜಿಕ ಹೊಣೆಗೇಡಿತನದ ಬಗ್ಗೆ ಬರೆಯುತ್ತಾ ಹೋದರೆ.... ಅದೊಂದು ಮುಗಿಯದ ಕಥೆ. ಇದಕ್ಕೆ ಅಂತ್ಯ ಹಾಡಬೇಕು. ಈ ಕುರಿತು ವ್ಯಾಪಕ ಚರ್ಚೆ ನಡೆದು ಮಾದ್ಯಮಗಳಿಗೆ ಕಡಿವಾಣ ಹಾಕಬೇಕು. ಈಗಾಗಲೇ ಕಮರ್ಷಿಯಲೈಸ್ ಹೆಸರಿನಲ್ಲಿ ಸುದ್ದಿಗಳನ್ನು ಒಂದು ಸರಕಿನಂತೆ ಮಾರಾಟ ಆರಂಭಿಸಿರುವ ಮಾಧ್ಯಮಗಳು ಈಗ ರಿಯಾಲಿಟಿ ಷೋಗಳ ಹೆಸರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ಮಾರಾಟಕ್ಕಿಟ್ಟಿವೆ. ಮುಂದೆ ಏನಾಗಬಹುದು ನೀವೇ ಯೋಚಿಸಿ...
ಒಂದಷ್ಟೂ ಸ್ಪಷ್ಟ, ಹಣದ ವ್ಯಾಮೋಹಕ್ಕೆ ಬಿದ್ದಿರುವ ಮಾಧ್ಯಮಗಳು ನಾಗರಿಕರನ್ನು ವಂಚಿಸುತ್ತಿವೆ. ಎಷ್ಟೊ ಜನರು ಮಾಧ್ಯಮಗಳಲ್ಲಿ ಬಂದಿರುವ ಚಿತ್ರ ವಿಮರ್ಶೆ ನೋಡಿಕೊಂಡೇ ಥಿಯೇಟ್ಗೆ ಕಾಲಿಡುವ ಮನಸ್ಸು ಮಾಡುತ್ತಾರೆ. ಇತ್ತ ಮಾಧ್ಯಮಗಳೇ ಕೆಟ್ಟ ಚಿತ್ರವೊಂದನ್ನು ಹೊಗಳಿ ಅಟ್ಟಕ್ಕೇರಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ????
Subscribe to:
Post Comments (Atom)
No comments:
Post a Comment