Saturday, October 17, 2009
ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?
ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ.
ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್ ಮತ್ತು ಪೋಲ್ಡರ್‌ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್‌ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್ ಕನ್ನಡದಲ್ಲಿ nanu nimma abhimani- ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide- ಪಾಯ್‌ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್ ಬರೆಯುವಂತಿದ್ದರೆ? ಎಂಎಸ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್‌ನಲ್ಲಿ ಕನ್ನಡದಲ್ಲೇ ಲೆಟರ್, ಪ್ರೆಸೆಂಟೇಷನ್, ಚಾರ್ಟ್ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ.
ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್‌ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್‌ನಲ್ಲಿವೆ. ಈ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಕನ್ನಡ ಟೈಪ್ ಮಾಡಬಹುದು. ಆದರೆ ಅದೇ ಕನ್ನಡ ಪಠ್ಯವನ್ನು ಬೇರೊಂದು ಕಂಪ್ಯೂಟರ್‌ನಲ್ಲಿ ನೋಡಬೇಕೆಂದರೆ ಅಲ್ಲೂ ಅದೇ ಸಾಫ್ಟ್‌ವೇರ್ ಅಥವ ಕನ್ನಡ ಫಾಂಟ್ ಸಪೂರ್ಟ್ ಇರಬೇಕು. ಇದು ANSI ಫಾಮ್ಯಾಟ್‌ನ ಬಹುದೊಡ್ಡ ನ್ಯೂನತೆ. ಮತ್ತೊಂದು ವಿಧಾನ ಯೂನಿಕೋಡ್ (ಯೂನಿಕೋಡ್‌ನಲ್ಲಿ ಕೆಲವು ವ್ಯಂಜನಗಳೊಂದಿಗೆ ಊ ಸ್ವರ ಮೂಡುವುದಿಲ್ಲ, ಅದಕ್ಕೆ ಇಲ್ಲಿ UNICODE ಅನ್ನು ಯಾನಿಕೋಡ್ ಎಂದೇ ಬರೆಯಲು ಸಾಧ್ಯ. ) ಇದು ವಿಶ್ವದ ಕಂಪ್ಯೂಟಿಂಗ್ ಇಂಡಸ್ಟ್ರಿ ಸ್ಟಾಂಡರ್ಡ್ ಆಗಿರುವುದರಿಂದ ಇಲ್ಲಿ ಆ ಸಮಸ್ಯೆ ಉದ್ಭವಿಸುವುದಿಲ್ಲ. ವಿಂಡೋಸ್‌ನಲ್ಲಿರುವ TUNGA ಫಾಂಟ್ ಯೂನಿಕೋಡ್‌ಗೆ ಉದಾಹರಣೆ. ಇಲ್ಲಿ ಟೈಪ್ ಮಾಡುವುದಕ್ಕಷ್ಟೆ ಸಾಫ್ಟ್‌ವೇರ್‌ನ ಅಗತ್ಯ ಅದನ್ನು ಕನ್ನಡ ಇಲ್ಲದ ಯಾವುದೇ ಕಂಪ್ಯೂಟರ್‌ನಲ್ಲೂ ವೀಕ್ಷಿಸಬಹುದು. ಇದಕ್ಕೆ ಮಾಡಬೇಕಿರುವುದು ಇಷ್ಟೆ, ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್ ಒಂದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನ ಕಂಟ್ರೋಲ್ ಪ್ಯಾನೆಲ್‌ನಲ್ಲಿ ಸೆಟ್ಟಿಂಗ್ಸ್‌ನಲ್ಲಿ ಬದಲಾವಣೆ ಮಾಡಬೇಕು ಅಷ್ಟೆ
ಹಾಗಿದ್ದರೆ ಅದನ್ನು ಮಾಡುವುದು ಹೇಗೆ?..... ಮುಂದೆ ಓದಿ
ಕನ್ನಡ ಟೈಪ್ ಮಾಡುವ ವಿಧಾನಗಳು:
ಯೂನಿಕೋಡ್ ಆಧರಿಸಿ ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.
ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವ ನಾಲ್ಕು ವಿಧಾನಗಳು:
1. ಬರಹ IME/ಬರಹ ಯೂನಿಕೋಡ್ : (Input Method Editor) (ಬರಹ ಯೂನಿಕೋಡ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ)
2. ಬರಹ ಪ್ಯಾಡ್ : (ಬರಹ ಯೂನಿಕೋಡ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ)
3. ಗೂಗಲ್ ಟ್ರಾನ್ಸ್‌ಲೇಷನ್ ಟೂಲ್‌ಕಿಟ್: (ಗೂಗಲ್ ಟ್ರಾನ್ಸಲೇಷನ್ ಟೂಲ್‌ಕಿಟ್‌ಗೆ ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ, ಇದರ ಸೌಲಭ್ಯ ಪಡೆಯಲು ನೀವು G Mail ಹೊಂದಿರಬೇಕು.)
4. ಕ್ವಿಲ್ ಪ್ಯಾಡ್ ಆನ್ ಲೈನ್: (ಇದನ್ನು ತೆರೆಯಲು ಇಲ್ಲಿ ಕ್ಲಿಕ್ ಮಾಡಿ)
1. ಬರಹ IME : ಬರಹ - ಕನ್ನಡದ ಒಂದು ಸಾಫ್ಟ್ ವೇರ್. ಅಮೇರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಶೇಷಾದ್ರಿ ವಾಸು ಕನ್ನಡದಲ್ಲಿ ಎನ್ನುವ ಸಾಫ್ಟ್‌ವೇರ್ ರೂಪಿಸಿ ಬಹುತೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವ ಅವಕಾಶ ಕಲ್ಪಿಸಿದರು. ಸರ್ಕಾರದ ಅಧಿಕೃತ ಸಾಫ್ಟ್‌ವೇರ್ ನುಡಿಯನ್ನು ಹೊರತುಪಡಿಸಿ ಇದು ಕನ್ನಡಿಗರ ಮೆಚ್ಚಿನ ಕನ್ನಡ ಸಾಫ್ಟ್‌ವೇರ್ ಆಗಿದೆ. ಮೊದಲು ANSI ಶಿಷ್ಟಾಚಾರದಲ್ಲಿದ್ದ ಬರಹ ಇದೀಗ UNICODEನಲ್ಲೂ ಲಭ್ಯವಿದೆ.
BarahaIME (ಬರಹದ ರೀತಿಯಲ್ಲಿಯೇ ಕೆಲವ ಮಾಡುವ Indic IME (Kannada)ಯನ್ನು ವೆಬ್‌ದುನಿಯಾದವರು ಅಭಿವೃದ್ಧಿಪಡಿಸಿದ್ದಾರೆ. ಇದು ಭಾಷಾ ಇಂಡಿಯಾ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ. ಒಂದು ಅಧ್ಬುತ ಅಪ್ಲಿಕೇಷನ್. ಇದನ್ನು ಬಳಸಿಕೊಂಡು ಕಂಪ್ಯೂಟರ್ ಅನ್ನು ಪೂರ್ತಿ ಕನ್ನಡಮಯವಾಗಿಸಿಬಿಡಬಹುದು. ಪೈಲ್ ಮತ್ತು ಫೋಲ್ಡರ್‌ಗಳನ್ನು ಕನ್ನಡದಲ್ಲಿಯೇ ಸೇವ್ ಮಾಡಬಹುದು. ಹಾರ್ಡ್‌ಡಿಸ್ಕ್ ಡ್ರೈವ್‌ಗಳನ್ನು ಕನ್ನಡದಲ್ಲಿ ರೀನೇಮ್ ಮಾಡಬಹುದು, MS Officeನ ( MS Officeನಲ್ಲಿ ಕನ್ನಡ ಬಳಸುವುದು ಹೇಗೆಂಧು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ )ಯಾವುದೇ ಅಪ್ಲಿಕೇಷನ್‌ನಲ್ಲಿ ಸುಲಭವಾಗಿ ಕನ್ನಡ ಟೈ್‌ಪ್ ಮಾಡಬಹುದು, ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್ ಮಾಡಬಹುದು, ಎಂದರೆ ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ನಾವು ಕನ್ನಡದಲ್ಲಿ ಹುಡುಕುತ್ತಿರುವ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಬಹುದು, ಬ್ಲಾಗ್ , ಸೋಷಿಯಲ್ ನೆಟವರ್ಕ್ಸ್, ವೆಬ್‌ಸೈಟ್ ಮುಂತಾದ ಕಡೆಗಳಲ್ಲಿ ಲೇಖನ ಅಥವಾ ಕಾಮೆಂಗಳನ್ನು ಕನ್ನಡದಲ್ಲೇ ಬರೆಯಬಹುದು, ನಿಮ್ಮ ಯಾವುದೇ ಮೇಲ್ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಮೇಲ್ ಟೈಪ್ ಮಾಡಬಹುದು, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಮೆಸೆಂಜರ್ ಆಗಿರಲಿ ಕನ್ನಡದಲ್ಲಿ ಚಾಟ್ ಮಾಡಬಹುದು.
ಕಂಪ್ಯೂಟರ್‌ನಲ್ಲಿ Baraha IMEಯನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೆಟಪ್ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
2. ಬರಹ ಪ್ಯಾಡ್: ಇದು ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ರೂಪಿಸಿರುವ ಒಂದು ಪುಟ್ಟ ಅಪ್ಲಿಕೇಷನ್ ಸಾಫ್ಟ್‌ವೇರ್. ಇದು ನೋಟ್‌ಪ್ಯಾಡ್‌ನಂತೆಯೇ ಇದ್ದು ಭಾರತೀಯ ಭಾಷೆಗಳನ್ನು ಯೂನಿಕೋಡ್‌ನಲ್ಲಿ ಬರೆಯಲು ಅನುವು ಮಾಡಿಕೊಡುತ್ತದೆ. ಇದು ಬರಹ ಯೂನಿಕೋಡ್ ಸಾಫ್ಟ್‌ವೇರ್ ಜೊತೆಯಲ್ಲೇ ಬರುತ್ತದೆ. ಹೀಗಾಗಿ ನೀವು ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲ. BarahaUnicode 2.0 ಇನ್‌ಸ್ಟಾಲ್ ಮಾಡಿಕೊಂಡರೆ BarahaIME ಮತ್ತು BarahaPad ಎರಡರ ಸೌಲಭ್ಯವೂ ದೊರೆಯುತ್ತವೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
3. ಗೂಗಲ್ ಟ್ರಾನ್ಸ್‌ಲೇಷನ್ ಟೂಲ್ ಕಿಟ್ : ಇದು ಇಂಟರ್ನೆಟ್‌ನಲ್ಲಿ ಪೈಲ್‌ಗಳನ್ನು ಕನ್ನಡದಲ್ಲಿ ಅಪ್‌ಡೇಪ್ ಮಾಡಲು ಹೇಳಿ ಮಾಡಿಸಿದ ಟೂಲ್. GMail ಮೂಲಕ ಲಾಗಿನ್ ಆಗಿ ಅಲ್ಲಿರುವ ಗೂಗಲ್ ಡಾಕುಮೆಂಟ್ಸ್‌ನಲ್ಲಿ ನಿಮ್ಮ ಯಾವುದೇ ಭಾಷೆಯ ಯಾವುದೇ ಫೈಲ್‌ಗಳನ್ನು ಸೇವ್ ಮಾಡಬಹುದು, ನಿಮ್ಮ ರೆಸ್ಯೂಮ್, ಲೆಟರ್ ಯಾವುದೇ ಇರಲಿ ಅವುಗಳನ್ನು ಈ ಟೂಲ್‌ಕಿಟ್ ಬಳಸಿಕೊಂಡು ಅಲ್ಲಿಯೇ ಕನ್ನಡದಲ್ಲಿ ಎಡಿಟ್ ಮಾಡಿ ಆನ್‌ಲೈನ್‌ನಲ್ಲೇ ಸೇವ್ ಮಾಡಬಹುದು. ಈ ಟೂಲ್‌ಕಿಟ್‌ನಲ್ಲಿ ಭಾರತೀಯ ಭಾಷೆಗಳಷ್ಟೇ ಅಲ್ಲ ವಿಶ್ವದ ಹಲವು ಭಾಷೆಗಳ ಸೌಲಭ್ಯವನ್ನು ಗೂಗಲ್ ಟ್ರಾನ್ಸ್‌ಲೇಷನ್ ಟೂಲ್ ಕಿಟ್ ನೀಡುತ್ತದೆ.
ಇದರ ಬಗ್ಗೆ ಮತ್ತಷ್ಟು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ
ಗೂಗಲ್ ಟ್ರಾನ್ಸ್‌ಲೇಷನ್ ಟೂಲ್ ಕಿಟ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.
4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು. ಇದೂ ಕೂಡ ಆನ್‌ಲೈನ್ ಎಡಿಟರ್ ಆಗಿದ್ದು ಕನ್ನಡ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವ ಗೊಂದಲವಿಲ್ಲದೆ ಇಂಟರ್ನೆಟ್‌ನಲ್ಲಿ ಕನ್ನಡವನ್ನು ಎಡಿಟ್ ಮಾಡುವ ಅವಕಾಶ ಕಲ್ಪಿಸುತ್ತದೆ. ಕ್ವಿಲ್‌ಪ್ಯಾಡ್ ಕನ್ನಡ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.
C. ಕನ್ನಡ ಅಕ್ಷರಗಳನ್ನು ಟೈಪ್ ಮಾಡುವುದನ್ನು ಕಲಿಯಬೇಕೆ?
ಕಂಪ್ಯೂಟರ್‌ನಲ್ಲಿ ಕನ್ನಡ ಟೈಟ್ ಮಾಡಲು ಹಲವು ಕೀಬೋರ್ಡ್ ವಿನ್ಯಾಸಗಳಿವೆ. ಬರಹ ಮತ್ತು ನುಡಿಯನ್ನು ಇಲ್ಲಿ ವಿವರಿಸಿದ್ದೇನೆ.
ಬರಹ ಕೀಬೋರ್ಡ್:
ಇದು ಅತ್ಯಂತ ಸರಳ ಕನ್ನಡ ಟೈಪಿಂಗ್ ಕೀಬೋರ್ಡ್ ವಿನ್ಯಾಸ (ಟೈಪಿಂಗ್ ಕೀಬೋರ್ಡ್ ವಿನ್ಯಾಸ ಎಂದರೆ ಇಂಗ್ಷೀಷ್ ಅಕ್ಷರಗಳನ್ನು ಒತ್ತುವ ಮೂಲಕ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಯಾವ ಅಕ್ಷರಗಳನ್ನು ಒತ್ತಿದರೆ ಯಾವ ಅಕ್ಷರ ಮೂಡಬೇಕು ಎನ್ನುವುದನ್ನು ಕೀಬೋರ್ಡ್ ವಿನ್ಯಾಸಗಳು ನಿರ್ಧರಿಸುತ್ತವೆ.) ಇದು ಕನ್ನಡ ನನ್ನ ಮಾತೃ ಭಾಷೆ ಎನ್ನುವುದನ್ನು kannada nanna maatru bhaashe, ಎಂಬಂತೆ ಟೈಪ್ ಮಾಡುವ ವಿಧಾನದ್ದು. ಕನ್ನಡ ಇಲ್ಲದ ಮೊಬೈಲ್‌ನಲ್ಲಿ ನಮ್ಮ ಹೃದಯದ ಭಾವನೆಗಳನ್ನು ಪರಬಾಷೆಯಲ್ಲಿ ಅಭಿವ್ಯಕ್ತಿಸಲು ಕಷ್ಟವಾದಾಗ ನಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸಲು ನಾವು ಬಳಸುವ ಎಸ್ಸೆಮ್ಮಸ್ ಕನ್ನಡದ ಮಾದರಿಯದ್ದು ಈ ವಿನ್ಯಾಸ.
ಈ ವಿನ್ಯಾಸವನ್ನು ಕಲಿಯಲು ಇಲ್ಲಿ ಕ್ಲಿಕ್ ಮಾಡಿ
ಕಗಪ (ಕನ್ನಡ ಗಣಕ ಪರಿಷತ್ತು) ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. ಇದು ಬಹುತೇಕ ಕನ್ನಡ ಟೈಪ್‌ರೈಟರ್ ಮಾದರಿಯದ್ದು. ಇದನ್ನು ಕಲಿತರೆ ಟೈಪ್ ಮಾಡುವುದು ಬಹಳ ಸುಲಭ. ಇದು ನಮ್ಮ ಟೈಪಿಂಗ್ ಸಮಯವನ್ನು ಉಳಿಸುತ್ತದೆ. ಇದನ್ನು ಕಗಪ ಕೀಬೋರ್ಡ್ ಎನ್ನುತ್ತಾರೆ.
ಇದನ್ನು ಕಲಿಯುವ ಆಸಕ್ತಿ ನಿಮಗಿದ್ದರೆ ಇಲ್ಲಿ ಕ್ಲಿಕ್ಕಿಸಿ.
Subscribe to:
Post Comments (Atom)
No comments:
Post a Comment